
ಕೃಷಿ ಆಶ್ರಮ
"ಬಡ ರೈತ"
ಎಂಬ ಮಾತು
ಈಗ ದೂರವಾಗಬೇಕಾದ
ದಿನ ಬಂದಿದೆ.
ರೈತರನೂ ಸಹ ಉದ್ಯಮಿಯಾಗಿ
ಬೆಳೆಯಬಲ್ಲ.
ಮುಂಬರುವ ದಿನಗಳಲ್ಲಿ
ಕೃಷಿಯೇ ಆದ್ಯತೆಯನ್ನು
ಪಡೆಯಲಿದೆ.
ಕೃಷಿಯನ್ನ
ಜೀವನಾಧಾರವನ್ನಾಗಿಸಿ
ಕೊಳ್ಳುವ ತವಕದಲ್ಲಿ ಪಟ್ಟಣಿಗರು
ಈಗ ಹಳ್ಳಿಗಳನ್ನ
ಸೇರುತ್ತಿದ್ದಾರೆ.
ಅವರಿಗೊಂದು
ಭರವಸೆ ಜ್ಜಾನ ಕೊಡುವ
ತಾಣಗಳೇ ಈ
"ಕೃಷಿ ಆಶ್ರಮ ಗಳು.
ಕೃಷಿಯಲ್ಲಿರುವ
ಸಂಕಷ್ಟಗಳಿಗೆ
ಒಂದು ಪರಿಹಾರ
ಕಂಡುಕೊಂಡು
ಕೇವಲ ಒಂದು ಎಕರೆಯಲ್ಲಿ
ಒಂದು ಕುಟುಂಬದ
ನಿರ್ವಹಣೆಯಿಂದ
ಸುಸ್ಥಿರ
& ಸಂತಸದ� ಜೀವನವನ್ನು
ಕಂಡುಕೊಳ್ಳಲು
ಸಾಧ್ಯ.
ಈ ನಿಟ್ಟಿನಲ್ಲಿ ಚಿಂತನೆ ಮಾಡಿ ಈ ಒಂದು ಎಕರೆಯಲ್ಲಿ ಮಾದರಿಯನ್ನು ಸಿದ್ಧಪಡಿಸಿ ಇಲ್ಲಿ ಕೊಡಲಾಗಿದೆ
�
ಸಾವಯವ / ನೈಸರ್ಗಿಕ ಕೃಷಿ ಸಂಪೂರ್ಣ Automated Drip Irrigation system.
�
ಜೀವವೈವಿಧ್ಯತೆ (Biodiversity)/ ಪರಿಸರ ಪೂರಕ/ ಸರಳ ಜೀವನಕ್ಕೆ ಮೊದಲ ಆದ್ಯತೆ.
�
ಜಮೀನಿನ ಈಶಾನ್ಯ ಭಾಗದಲ್ಲಿ ಪಂಚವಟಿ ಮತ್ತು ಇತರೆ ದೈವೀಕ ವನಗಳು (ಸಕಾರಾತ್ಮಕತೆ ಸೃಷ್ಟಿಸಲು)
ಕೃಷಿ ಜಮೀನಿಗೆ ಬೇಲಿ :-
�
ವಾಯುವ್ಯ (North - East) ದಿಕ್ಕಿನಲ್ಲಿ ಆಡುಸೋಗೆ ಬೇಲಿ
�
ಆಗ್ನೇಯಕ್ಕೆ (East - South) ಲಕ್ಕಿ ಬೇಲಿ
�
ಕುಬೇರ (West - South) ದಿಕ್ಕಿಗೆ ಇಪ್ಪಲಿ ಬೇಲಿ
�
ಈಶಾನ್ಯದ (East - North) ಕಡೆಗೆ ಲಕ್ಕಿ ಬೇಲಿ
ಜೊತೆಗೆ ಜಮೀನಿನ ಸುತ್ತ ಜೀವಂತ ಬೇಲಿಯೂ ಇರಲಿ, ಇದರಲ್ಲಿ ಪಶುಗಳಿಗೆ ಆಹಾರ, ರೈತರಿಗೆ ಹಲವು ವಿಧದ ಫಲಗಳನ್ನು ನೀಡುವ ಮರ - ಬಳ್ಳಿಗಳು, ಜಮೀನಿಗೆ ಫಲವತ್ತತೆಯನ್ನು ಹೆಚ್ಚಿಸುವ ಸಸ್ಯ ರಾಶಿ, ಜೇನಿಗೆ ಆಸರೆ, ಪಕ್ಷಿಗಳಿಗೆ ಆಹಾರ ಮತ್ತು ಗೂಡು ಕಟ್ಟಲು ಸಹಾಯ ಆಗುವಂತೆ ಮರ ಗಿಡ ಬಳ್ಳಿಗಳನ್ನ ಸೃಷ್ಟಿಸುವುದು... ಹೀಗೆ ವೈವಿಧ್ಯಮಯ ಸಸ್ಯ ರಾಶಿಯನ್ನು ಅಲ್ಲಿ ಸೃಷ್ಟಿಸುವುದು. ಕೇವಲ ಬೇಲಿಯಿಂದಲೇ ರೈತನಿಗೆ ಸಾಕಷ್ಟು ಆದಾಯ ಬರುವಂತಿರಬೇಕು.
� 36 x 36 ಅಡಿಗಳ ಅಳತೆಯಲ್ಲಿ ಒಂದು ಮಿಶ್ರ ಬೆಳೆಗಳ ಹಣ್ಣಿನ ಮಾದರಿ. ಇದರಲ್ಲಿ ಕುಟುಂಬಕ್ಕೆ ಬೇಕಾದ ಕನಿಷ್ಠ 40 ತರಹದ ಹಣ್ಣುಗಳನ್ನು ಬೆಳೆಯುವುದು (ಪ್ರದೇಶವಾರು ಬೆಳೆಗಳು)
� 36 x 36 ಅಡಿಗಳ ವಿಸ್ತೀರ್ಣದಲ್ಲಿ ಮನೆಗೆ ಬೇಕಾಗುವ ಎಲ್ಲಾ ತರಕಾರಿಗಳ (ಆಯಾ ಪ್ರದೇಕ್ಕೆ ಅನುಗುಣವಾಗಿ, ರೈಸ್ ಬೆಡ್ ವಿಧಾನದಲ್ಲಿ) ಬೆಳೆಯುವುದು
� 36 x 36 ಅಡಿಗಳ ವಿಸ್ತೀರ್ಣದಲ್ಲಿ ಪಂಚತರಂಗಿಣಿ ತೆಂಗಿನ ಮಾಡಲ್ (ತೆಂಗಿನ ತೋಟದ ಮಧ್ಯೆ ಸರಿಸುಮಾರು 15 ರಿಂದ 20 ತರಹದ ಆಯಾ ಪ್ರದೇಶಾನುವಾರು ಬೆಳೆಗಳನ್ನ ಬೆಳೆಯುವುದು)
� 20 x 20 ಅಡಿಗಳ ವಿಸ್ತೀರ್ಣದಲ್ಲಿ Miyawaki ಗಾರ್ಡನ್ (ಇದು ಪರಿಸರಕ್ಕೆ ಮೀಸಲು)
� 15 x 20 ಅಡಿಗಳ ಧ್ಯಾನ ಮಂದಿರ (ಪರಿಸರ ಪೂರಕ ಮಂದಿರ)
� 15 x 15 ಅಡಿಗಳ ವಿಸ್ತೀರ್ಣದಲ್ಲಿ ನರ್ಸರಿ �(Endangered plant)
� 20 x 20 ಅಡಿಗಳ ವಿಸ್ತೀರ್ಣದಲ್ಲಿ ಔಷಧಿ ವನ (ಬಂದ ಪ್ರವಾಸಿಗರಿಗೆ ಟೀ - ಕಾಫಿ ಬದಲು ಈ ಗಿಡ ಮೂಲಿಕೆಗಳಿಂದಲೇ ಕಷಾಯ, ಆಹಾರ ಉತ್ಪನ್ನಗಳನ್ನು ತಯಾರಿಸಿ ಬಡಿಸುವುದು)
� ಪ್ರವಾಸಿಗರ ಕೊಠಡಿಗಳು (12 x 15 ಅಡಿ ಅಥವಾ 16 x 20 ಅಡಿಗಳ ಜಾಗದಲ್ಲಿ), ಅಲ್ಲಿ ಎಲ್ಲಾ ಸವಲತ್ತುಗಳು ಇರಲಿ, ಜೊತೆಗೆ ಒಂದು ಅಡಿಗೆ ಮನೆ ಕೂಡ
� ದೇಶಿ ಬೀಜ ಮಂದಿರ ಕೊಠಡಿ - (ಅಗತ್ಯಕ್ಕೆ ತಕ್ಕಂತೆ).
� ಮಾರಾಟ ಮಳಿಗೆ
(Family Farmer Seva Kentra / F-mart): ರೈತ ತಾನು ಬೆಳೆದ ಎಲ್ಲ ಉತ್ಪನ್ನಗಳು ಮತ್ತು ಮೌಲ್ಯವರ್ಧನೆ ಮಾಡಿದ ಪದಾರ್ಥಗಳನ್ನು ಇಲ್ಲಿ ಅವನದೇ ಬೆಲೆಯಲ್ಲಿ ಮಾರಾಟ ಮಾಡುವುದು
� ಜಮೀನಿನ ಎತ್ತರದ ಸ್ಥಳದಲ್ಲಿ/ ಪೂರ್ವ ಅಥವಾ ಉತ್ತರ ದಿಕ್ಕಿನ ಪರಿಸರ ಪೂರಕ ಮನೆ, ಆ ಮನೆಗೆ ಮಳೆನೀರು ಕೊಯ್ಲನ್ನ ಏರ್ಪಡಿಸಿರುವುದು
� ಇಳಿಜಾರಿಗೆ ಇರುವ ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸುವುದು 25 x 16 ಅಡಿಗಳ ಜಾಗದಲ್ಲಿ or convenient size
� ತೋಟದ ಸುತ್ತಲೂ ತಿರುಗಾಡಲು ದಾರಿ (Walking path) ಐದು ಅಡಿ ಅಗಲ
� ಇಡೀ ಜಮೀನಿಗೆ ಬೇಕಾದ ವಿದ್ಯುತ್ತನ್ನು ಸೋಲಾರ್ ಪ್ಯಾನೆಲ್ ಗಳ ಮೂಲಕ ವಿದ್ಯುತ್ ಉತ್ಪಾದಿಸುವುದು
� ಬೋರ್ವೆಲ್ ಇದ್ದಲ್ಲಿ ಅದಕ್ಕೆ ಮಳೆ ನೀರಿನ ಕೊಯ್ಲು
� ಒಂದು ಸಣ್ಣ ಕಟ್ಟಡದಲ್ಲಿ ಮೌಲ್ಯವರ್ಧನೆ ಮತ್ತು ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ
� ಸಾವಯವ ಗೊಬ್ಬರ ಘಟಕ
� ಮನೋರಂಜನೆ ಪ್ರದೇಶ (Recreation Centre)
� ಪಶು ಸಾಕಣೆ ಕೇಂದ್ರ (Sheep, Goats, Fish, Pigs, Bees)
� ಉಳಿದ ಪ್ರದೇಶದಲ್ಲಿ ಮನೆಗೆ ಬೇಕಾದ ಎಲ್ಲ ತರಹದ ಧಾನ್ಯಗಳನ್ನ ಬೆಳೆದುಕೊಳ್ಳುವುದು.
Contact
Dr.
Nagabhushan, ಸಂಚಾಲಕರು,
ಕೃಷಿ ಆಶ್ರಮ
+91 99160 30272